ವರುಣ ಪೊಲೀಸ್ ಠಾಣಾ ಸರಹದ್ದು ಭುಜಗನಪುರ ಗ್ರಾಮ ಚಾಮರಾಜನಗರ ಜಿಲ್ಲೆಯ ಪಿರ್ಯಾದಿಯವರ ತಂದೆ ಗುರಕಪುರ ಹೊಸಹಳ್ಳಿ ರಸ್ತೆಯಲ್ಲಿ ಚಲಿಸುವಾಗ ಎದುರಿಗೆ ಬಂದ ಚಾಲಕನ ಅತೀವೇಗ ಹಾಗೂ ಅಜಾಗರುತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಮಿನಾಕ್ಷಿಪುರಂ ವಾರ್ಡಿನ ನಿವಾಸಿಯಾದ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಸರಗೂರು ಪೊಲೀಸ್ ಠಾಣಾ ಸರಹದ್ದು ಆಗತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದು ಬಾತ್ಮೀದಾರರ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಸರಗೂರು ಪೊಲೀಸ್ ಠಾಣಾ ಸರಹದ್ದು ನಂದಿನಾಥಪುರ ಬಸ್ಸು ನಿಲ್ದಾಣ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದು ಬಾತ್ಮೀದಾರರ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment