ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಕಲ್ಕುಂದ ಗ್ರಾಮದ ಪಿರ್ಯಾದಿಯವರು ದಡದಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಬಳಿ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 1,24,000/-ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಇಲವಾಲ ಪೊಲೀಸ್ ಠಾಣಾ ಸರಹದ್ದು ಕೂರ್ಗಳ್ಳಿ ವನ್ಯಜೀವಿ ಪುನರ್ ವಸತಿ ಕೇಂದ್ರದಲ್ಲಿ ಶ್ರೀಗಂಧದ ಮರವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 2,72,000/-ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಸಾಲಿಗ್ರಾಮ ಪೊಲೀಸ್ ಠಾಣಾ ಸರಹದ್ದು ದಮ್ಮನಹಳ್ಳಿ ಗ್ರಾಮದ ನಿವಾಸಿಯಾದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದು ಮೂಕನಹಳ್ಳಿ ಗ್ರಾಮದ ಪಿರ್ಯಾದಿಯವರು ಮನೆಯಲ್ಲಿ ಯಾರೋ ಕಳ್ಳರು ಬೀಗ ಹೊಡೆದು ಚಿನ್ನ ಹಾಗೂ ಬೆಳ್ಳಿಯ ಆಭರಣವನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 5,75,000/-ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment