ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Friday, May 17, 2024

ದೈನಂದಿನ ಅಪರಾಧಗಳ ಮಾಹಿತಿ 17.05.2024

 ಇಲವಾಲ ಪೊಲೀಸ್‌ ಠಾಣಾ ಸರಹದ್ದು ಜೆಟ್ಟಿಹುಂಡಿ ಗ್ರಾಮದಲ್ಲಿನ ಪ್ರತ್ಯಂಗಿರ ದೇವಸ್ಥಾನದಲ್ಲಿ ಆಡಳಿತ ಮಂಡಳಿಯವರು ಕೋಳಿಯನ್ನು ಹಿಂಸಾತ್ಮಕವಾಗಿ ಬಲಿಯನ್ನು ನೀಡಿ ಬಲಿ ಕೊಟ್ಟ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಪಿರಿಯಾ ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಅವರೆಕಾಯಿ ಗುಡ್ಡದ ಕಾವಲ್‌ ಗ್ರಾಮದಲ್ಲಿ ಪಿರ್ಯಾದಿರವರ ಜಮೀನಿನಲ್ಲಿ ಆರೋಪಿತರುಗಳು ಯಾರೋ ಸುಮಾರು 60 ಸಾವಿರ ರೂ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.

ಬೈಲಕುಪ್ಪೆ ಪೊಲೀಸ್‌ ಠಾಣಾ ಸರಹದ್ದು ಚೌಡಿಕಟ್ಟೆ ಬಳಿಯಲ್ಲಿ ಪಿರ್ಯಾದಿರವರ ತಂದೆ ಬೈಕ್‌ ನಿಂದ ಬಿದ್ದು ಮೃತಪಟ್ಟಿರುತ್ತಾರೆಂದು ಹೇಳಿ ಹೆಮ್ಮಿಗೆ ಗ್ರಾಮದ ವಾಸಿ ಪಿರ್ಯಾದಿರವರು ನೀಡಿದ ದೂರಿನ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

 ನಂಜನಗೂಡು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಕನಕ ಭವನ ಬಳಿಯಲ್ಲಿ ಪಿರ್ಯಾದಿರವರ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಹುಲ್ಲಹಳ್ಳಿ ಪೊಲೀಸ್‌ ಠಾಣಾ ಸರಹದ್ದು ಮಲ್ಕುಂಡಿ ವಾಸಿಯು ಅಪ್ರಪ್ತಾವಯಸ್ಸಿನ ಯುವತಿಯನ್ನು ವಿವಾಹವಾಗ ಗರ್ಭವತಿಯನ್ನಾಗಿ ಮಾಡಿದ ಮೇರೆಗೆ ಪ್ರಕರಣವನ್ನು ದಾಖಲಿಸಲು ಸುಶೀಲ ಸಿ ಬಿ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ನಂಜನಗೂಡು  ರವರು ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.

ಟಿ ನರಸೀಪುರ ಪೊಲೀಸ್‌ ಠಾಣಾ ಸರಹದ್ದು ಕುರುಬೂರು ಸರ್ಕಾರಿ ಶಾಲೆ ಬಳಿಯಲ್ಲಿ ಪಿರ್ಯಾದಿ ರವರ ಮಗನಿಗೆ ಅಪಘಾತವಾಗಿ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಪಿರಿಯಾಪಟ್ಟಣ ಪೊಲೀಸ್‌ ಠಾಣಾ ಸರಹದ್ದು ವಿ ಜಿ ಕೊಪ್ಪಲು ಗ್ರಾಮದಲ್ಲಿ ಪಿರ್ಯಾದಿ ರವರ ಬಾಬ್ತು ಸುಮಾರು 50 ಗ್ರಾಂ ತೂಕದ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡು ಹೋದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಹುಣಸೂರು ಗ್ರಾಮಾಂತರ ಸರಹದ್ದು ಚುಂಚನಕಟ್ಟೆ ರಸ್ತೆಯಲ್ಲಿ ಪಿರ್ಯಾದಿರವರ ಗಂಡನಿಗೆ ಎದುರಿನಿಂದ ಬಂದ ಬೈಕ್‌ ನ ಸವಾರ ತನ್ನ ಬೈಕನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಢಿಕ್ಕಿ ಮಾಡಿದ್ದರಿಂದ ಪಿರ್ಯಾದಿರವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 



Thursday, May 16, 2024

ದೈನಂದಿನ ಅಪರಾಧಗಳ ಮಾಹಿತಿ 16.05.2024

ಮೈಸೂರು ದಕ್ಷಿಣ ಪೊಲೀಸ್‌ ಠಾಣಾ ಸರಹದ್ದು ಹೊಸಹುಂಡಿ ಗ್ರಾಮದ ಹತ್ತಿರ ವ್ಯಾನ್‌ ಚಾಲಕ ಅತೀ ವೇಗ ಹಾಘೂ ಅಜಾಗರುಕತೆಯಿಂದ ಚಲಾಯಿಸಿ ಅಟೋ ಗೆ ಡಿಕ್ಕಿ ಮಾಡಿದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಇಲವಾಲ ಪೊಲೀಸ್‌ ಠಾಣಾ ಸರಹದ್ದು ಇಲವಾಲ-ಚಿಕ್ಕನಹಳ್ಳಿ ರಸ್ತೆಯಲ್ಲಿ ಶನಿದೇವರ ದೇವಸ್ಥಾನದಿಂದ ಸ್ವಲ್ಪ ಮುಂದೆ ರಸ್ತೆಯ ಬಳಿ ಟಾಟಾ ಕಂಪನಿಯ ಹಾಲಿನ ವಾಹನವನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್‌ ಗೆ ಅಪಘಾತ ಮಾಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ಥಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಹೊಸುರು ಕಲ್ಲಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ತಿ ನರಸೀಪುರ ಪೊಲೀಸ್‌ ಠಾಣಾ ಸರಹದ್ದು  ಕೆ ಹೆಚ್ ಬಿ ಕಾಲೋನಿ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಪಿರಿಯಾಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಕೀರನಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ವರುಣ ಪೊಲೀಸ್‌ ಠಾಣಾ ಸರಹದ್ದು ವಾಜಮಂಗಲ ಗ್ರಾಮದ ಲೇ ಔಟ್‌ ಬಳಿ ಪಿರ್ಯಾದಿಯವರ ಬಾಬ್ತು ಬೈಕ್‌ ನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ನಾಗಮಂಗಲ ಗೇಟ್‌ ಬಳಿ ಕೆ ಎಸ್‌ ಆರ್‌ ಟಿ ಸಿ ಬಸ್‌ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ  ಬೈಕ್‌ ಗೆ ಅಪಘಾತ ಮಾಡಿದ ಪರಿಣಾಮ  ಮೃತರಾಗಿರುತ್ಥಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.


Wednesday, May 15, 2024

ದೈನಂದಿನ ಅಪರಾಧಗಳ ಮಾಹಿತಿ 15.05.2024

ಪಿರಿಯಾಪಟ್ಟಣ  ಪೊಲೀಸ್‌ ಠಾಣಾ ಸರಹದ್ದು ಕೆ ಎಂ ಬಡಾವಣೆ ವಾಸಿ  ಪಿರ್ಯಾದಿಯವರ  ಬಾಭ್ತು ಬೈಕ್ನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಪಿರಿಯಾಪಟ್ಟಣ ಪೊಲೀಶ್‌ ಠಾಣಾ ಸರಹದ್ದು ಮಾಲಂಗಿ ರಸ್ತೆ ಮುಮ್ಮಡಿ ಕಾವಲು ಗ್ರಾಮದ  ವಾಸಿ ಪಿರ್ಯಾದಿಯವರ  ಬಾಬ್ತು ಸುಮಾರು 5,21,000/- ರೂ ನಗದು ಮತ್ತು ಚಿನ್ನಾಭರಣಗಳನ್ನು ಯಾರೋ ಕಳ್ಳರು ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿರುತ್ತಾರೆ  ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೈಲುಕುಪ್ಪೆ ಪೊಲೀಶ್‌ ಠಾಣಾ ಸರಹದ್ದು ದೊಡ್ಡಕಮರಹಳ್ಳಿ ಗ್ರಾಮದ  ವಾಸಿ ಪಿರ್ಯಾದಿಯವರ  ಬಾಬ್ತು ಸುಮಾರು 23,500/- ರೂ ಬೆಲೆಬಾಳುವ ಪೈಪ್‌ ಹಾಗೂ ಜೆಟ್‌ ಗಳನ್ನುಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು  ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಅಂಬೇಡ್ಕರ್ ಭವನ ವಾಸಿ   ಪಿರ್ಯಾದಿಯವರ  ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ನಂಜನಗೂಡು  ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಮಧುರಸ್ ಬಾರ್ ಆರ್.ಪಿ.

ರಸ್ತೆಯಲ್ಲಿ  ಪಿರ್ಯಾದಿಯವರ  ಬಾಭ್ತು ಬೈಕ್‌ ನ್ನು  ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ತಿ ನರಸೀಪುರ  ಪೊಲೀಸ್‌  ಠಾಣಾ ಸರಹದ್ದು ವಿ ಎನ್ ಆರ್ ಲಾಡ್ಜ್ಖಾಸಗಿ ಬಸ್ ನಿಲ್ದಾಣದ  ಬಳಿ  ಪಿರ್ಯಾದಿಯವರ   ಮಾಂಗಲ್ಯ ಸರವು  ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.


 


Tuesday, May 14, 2024

ದೈನಂದಿನ ಅಪರಾಧಗಳ ಮಾಹಿತಿ 14.05.2024

ಜಯಪುರ ಪೊಲೀಸ್‌ ಠಾಣಾ ಸರಹದ್ದು ದಟ್ಟಗಳ್ಳಿ ಗ್ರಾಮದ ಪಿರ್ಯಾದಿಯವರ  ಬಾಬ್ತು ಸುಮಾರು 6,64000/- ರೂ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಹುಣಸೂರು ನಗರದ ಪಿರ್ಯಾದಿಯವರ ಗಂಡ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.

ಪಿರಿಯಾಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಕಿರನಲ್ಲಿ ಗೇಟ್‌ ವಾಸಿ  ಪಿರ್ಯಾದಿಯವರ ಮಗ  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.

ಹುಲ್ಲಹಳ್ಳಿ ಪೊಲೀಸ್‌ ಠಾಣಾ ಸರಹದ್ದು  ಯಾಲೇಹಳ್ಳಿ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.

Monday, May 13, 2024

ದೈನಂದಿನ ಅಪರಾಧಗಳ ಮಾಹಿತಿ 13.05.2024

ಜಯಪುರ ಪೊಲೀಸ್‌ ಠಾಣಾ ಸರಹದ್ದು ಪಟ್ಟಲದಮ್ಮನ ದೇವಸ್ಥಾನದ ಬಳಿ ದೂರ ಗ್ರಾಮದ ಬಳಿ ಬೈಕ್‌ ಸವಾರ ಬೈಕ್‌ ನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಬೈಕ್‌ ಸವಾರನಿಗೆ ಅಪಘಾತ ಮಾಡಿದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಸುಗ್ಗನಹಳ್ಳಿ ಗ್ರಾಮ  ವಾಸಿ ಪಿರ್ಯಾದಿಯವರ ಬಾಬ್ತು ಸುಮಾರು 1,80,000/- ರೂ ಬೆಲೆಬಾಳುವ ಪ್ಯಾಸೆಂಜರ್‌ ಆಟೋವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಸಾಲಿಗ್ರಾಮ ಪೊಲೀಸ್‌ ಠಾಣಾ ಸರಹದ್ದು ಕಾಳೇನಹಳ್ಳಿ ಗ್ರಾಮ  ಬಳಿ ಖಾಸಗಿ ಬಸ್ ಸವಾರ  ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಬೈಕ್‌ ಸವಾರನಿಗೆ ಅಪಘಾತ ಮಾಡಿದ ಪರಿಣಾಮ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.

ಸರಗೂರು ಪೊಲೀಸ್‌ ಠಾಣಾ ಸರಹದ್ದು ಸಾಗರೆ ಗ್ರಾಮ ಬಳಿ ಪಿರ್ಯಾದಿಯವರ ತಂದೆ  ಬೈಕ್‌ ನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸುವಾಗ ಹಸು ಅಡ್ಡ ಬಂದು ಬ್ರೇಕ್‌ ಹಾಕಿದ ಪರಿಣಾಮ ಬಿದ್ದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ಥಾರೆ.


Saturday, May 11, 2024

ದೈನಂದಿನ ಅಪರಾಧಗಳ ಮಾಹಿತಿ 11.05.2024

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಚೀರನಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಮಗ  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ. 

ರಗೂರು ಪೊಲೀಸ್‌ ಠಾಣಾ ಸರಹದ್ದು ಕಲ್ಲಂಬಾಳು  ಗ್ರಾಮ ವಾಸಿ ಪಿರ್ಯಾದಿಯವರ ಮಗಳು  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು  ದಾಖಲಿಸಿರುತ್ತಾರೆ.

ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಮುಸ್ಲಿಂ ಬ್ಲಾಕ್. ಕೆ.ಆರ್.ನಗರ ಟೌನ್ ವಾಸಿ ಪಿರ್ಯಾದಿಯವರ  ಬಾಭ್ತು ಸುಮಾರು ನಗದು ಹಣ 25ಲಕ್ಷ /- ರೂ ಮತ್ತು ಚಿನ್ನಭರಣ ಸೇರಿ ಒಟ್ಟು ಮೌಲ್ಯ 49 ಲಕ್ಷ/- ರೂ ನ್ನು ಯಾರೋ ಕಳ್ಳರು  ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿರುತ್ತಾರೆ ಎಂದು ನೀಡದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಲ್ಲಹಳ್ಳಿ ಪೊಲೀಸ್‌ ಠಾಣಾ ಸರಹದ್ದು ಕಡಜೆಟ್ಟಿ ಗ್ರಾಮ ವಾಸಿ ಪಿರ್ಯಾದಿಯವರ  ಬಾಭ್ತು ಸುಮಾರು  10,000 /- ರೂ ಪಂಪ್ ಸೆಟ್ ಗೆ ಸಂಬಂದಿಸಿದಂತೆ ಸ್ಟಾರ್ಟರ್ ,ಕೇಬಲ್, ಹಾಗೂ ವ್ಯವಸಾಯಕ್ಕೆ ಸಂಬಂದಿಸಿದ ಉಪಕರಣಗಳನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಬೈಲಕುಪ್ಪೆ ಪೊಲೀಸ್‌ ಠಾಣಾ ಸರಹದ್ದು ದೊಡ್ಡಹೊಸೂರು ಗ್ರಾಮ ವಾಸಿ  ಪಿರ್ಯಾದಿಯವರ ಬಾಭ್ತು ಸುಮಾರು 1,44,000 /- ರೂ ಬೆಲೆಬಾಳುವ ಚಿನ್ನಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ಥಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಮೈಸೂರು ದಕ್ಷಿಣ ಪೊಲೀಸ್‌ ಠಾಣಾ ಸರಹದ್ದು ತನ್ವೀರ್‌ ಸೇಠ್‌ ನಗರ ವಾಸಿ ಪಿರ್ಯಾದಿಯವರ ತಾಯಿ ಕಾಣೆಯಾಗಿರುತ್ತಾರೆ.


NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ