ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಕುಪ್ಪಲೂರು ಸಿದ್ದಲಿಂಗೇಶ್ವರ ಬಡಾವಣೆ ವಾಸಿ ಆರೋಪಿಯು ಪಿರ್ಯಾದಿರವರ ಮಗನಿಗೆ ಕೆಲಸವನ್ನು ಕೊಡಿಸುವುದಾಗಿ ಹೇಳಿ ಸುಮಾರು 11 ಲಕ್ಷದ 50 ಸಾವಿರ ರೂ ಹಣವನ್ನು ಪಡೆದು ಮೋಸ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಜಯಪುರ ಪೊಲೀಸ್ ಠಾಣಾ ಸರಹದ್ದು ಮದ್ದೂರು ಗ್ರಾಮದಲ್ಲಿ ಆರೋಪಿಯು ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಮೇರೆಗೆ ಪಿಎಸ್‌ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಪ್ರಕರಣವನ್ನು ದಾಖಲಿಸಿರುತ್ತದೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಚಂದಗಾಲು ಪಂಚಾಯತಿ ಚೀರ್ನಹಳ್ಳಿ ಗ್ರಾಮದಲ್ಲಿ ಪಿರ್ಯಾದಿರವರ ನಿವೇಶನಕ್ಕೆ ಚಿರನ್ನಹಳ್ಳಿ ಗ್ರಾಮದ ನಿವಾಸಿಗಳಲ್ಲಿ ಕೆಂಪರಾಜು ಶಿವಮಾದು ಸುಧಾಕರ ಸಂಪತ್ ಕುಮಾರ್ ರವರು ಪಿರ್ಯಾದಿ ನಿವೇಶನವನ್ನು ಟ್ರಾಕ್ಟರ್ ಮತ್ತು ಇತರೆ ಯಂತ್ರೋಪರಣದಿಂದ ದ್ವಂಸಗೊಳಿಸಿ ಪಿರ್ಯಾದಿ ನಿವೇಶನದಲ್ಲಿದ್ದು ಚರಂಡಿ ಹಾಗೂ ನಿವೇಶನದ ಕಲ್ಲುಗಳನ್ನು ತೆಗೆದು ಮತ್ತು ನಿವೇಶನದಲ್ಲಿ ತಂತಿಯನ್ನು ಕಳ್ಳತನ ಮಾಡಿ ಸಾಕ್ಷಿ ಸಿಗದ ಹಾಗೆ ನೆಲಸಮಗೊಳಿಸಿ ಈ ಮೇಲಿನ ದುಷೃತ್ಯವನ್ನು ಎಸೆಗಿದ್ದಾರೆ. ಈ ರೀತಿ ಅನಾಧಿಕೃತವಾಗಿ ಅಕ್ರಮ ಪ್ರವೇಶ ಮಾಡಿ ಯಾವುದೇ ಅಧಿಕಾರಿಗಳ ಗಮನಕ್ಕೆ ತರದೆ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ
ಸಾಲಿಗ್ರಾಮ ಪೊಲೀಸ್ ಠಾಣಾ ಸರಹದ್ದು ಬೀಚನಹಳ್ಳಿ ಕೊಪ್ಪಲು ಬೋರೆ ಸಾಲಿಗ್ರಾಮ ವಾಸಿ ಪಿರ್ಯಾಧಿ ರವರ ಸುಮಾರು 30 ಸಾವಿರ ರೂ ಬೆಲೆ ಬಾಳುವ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಬೇಕೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ
No comments:
Post a Comment