ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Monday, November 11, 2024

ದೈನಂದಿನ ಅಪರಾಧಗಳ ಮಾಹಿತಿ :: 11.11.2024

ಟಿ ನರಸೀಪುರ ಪೊಲೀಸ್‌ ಠಾಣಾ ಸರಹದ್ದು ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿ ಆಪರಿಚಿತ ಆಸಾಮಿಯು ಪಿರ್ಯಾದಿರವರ ಎಟಿಎಂ ಕಾರ್ಡ್‌ ಅನ್ನು ಬದಲಾಯಿಸಿ 24 ಸಾವಿರ ರೂ ಹಣವನ್ನು ಕಳೆದುಕೊಂಡಿದ್ದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಹುಣಸನಾಳಿನಿಂದ ಪಿರ್ಯಾಧಿ ರವರ ಮಗಳು ಮತ್ತು ಮೊಮ್ಮಗಳು ಕಾಣೆಯಾಗಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಬೈಲಕುಪ್ಪೆ ಪೊಲೀಸ್‌ ಠಾಣಾ ಸರಹದ್ದು ಆನಂದ ನಗರದಲ್ಲಿ ಆರೋಪಿತರುಗಳು ಸುಮಾರು 10 ರಿಂದ 15 ಕೆಜಿ ಗಾಂಜಾವನ್ನು ಶೇಖರಿಸಿಟ್ಟುಕೊಂಡಿರುತ್ತಾರೆಂದು ಹೇಳಿ ಪಿರ್ಯಾದಿರವರಿಗೆ ಬಾತ್ಮೀದಾರರಿಂದ ಮಾಹಿತಿ ಬಂದ ಮೇರೆಗೆ ಪ್ರಕರಣವನ್ನುದಾಖಲಿಸಲು ನೀಡಿದ ವರದಿ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಅಂತರಸಂತೆ ಪೊಲೀಸ್‌ ಠಾಣಾ ಸರಹದ್ದು ನೂರಲಕುಪ್ಪೆ ವಾಸಿ ಪಿರ್ಯಾದಿರವರ ಬಾಬ್ತು ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಹೇಳಿ ನೀಡಿದ  ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಹರವೆ  ರಾಮೇನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್‌ ಇಸ್ಪಿಟ್‌ ಆಟವನ್ನು ಆಡುತ್ತಿದ್ದ ಮೇರೆಗೆ ಪಿಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 05 ಜನರ ಮೇಲೆ ಪ್ರಕರಣವನ್ನು ದಾಖಲಿಸಿ 2700 ರೂ ನಗದನ್ನು ವಶಪಡಿಸಿಕೊಂಡಿರುತ್ತಾರೆ. 

ಜಯಪುರ ಪೊಲೀಸ್‌ ಠಾಣಾ ಸರಹದ್ದು ದೂರ ಮುಖ್ಯ ರಸ್ತೆಯಲ್ಲಿ ಪಿರ್ಯಾದಿರವರ ಮಗನು ಹೋಗುತ್ತಿದ್ದ ಬೈಕ್‌ ನ ಸವಾರ ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸಡನ್ನಾಗಿ ನಾಯಿಯೊಂದು ಅಡ್ಡ ಬಂದಿದ್ದರಿಂದ ಬೈಕ್‌ ನಿಯಂತ್ರಣ ತಪ್ಪಿ  ಬಿದ್ದು ಪಿರ್ಯಾದಿ ರವರ ಮಗ ಮೃತಪಟ್ಟಿರುತ್ತಾನೆಂದು ಹೇಳಿ ನೀಡಿದ  ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ. 

No comments:

Post a Comment

NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ