ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Wednesday, January 7, 2026

ದೈನಂದಿನ ಅಪರಾಧಗಳ ಮಾಹಿತಿ 07.01.2026

 ಕೆ ಅರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಕುವೆಂಪುನಗರ ಬಡಾವಣೆ ಕೆ ಅರ್‌ ನಗರ ಟೌನಿನ ವಾಸಿ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಅದರ ಬೆಲೆ ಸುಮಾರು 2,00,000/- ರೂ ಚಿನ್ನ ಹಾಗೂ 20,000/- ರೂ ಬೆಲೆಯ ಬೆಳ್ಳಿಯೆಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಕೆ ಅರ್‌ ನಗರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಪಿಎಸ್‌ಐ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿ ಕ್ಯಾಂಟರ್‌ ಗೊಡ್ಸ್‌ ವಾಹನ ಚಾಲಕನನ್ನು ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿ ಸಾಗಟ ಮಾಡುತ್ತಿದ್ದು ಸುಮಾರು 1.08,000/- ರೂ  ಬೆಲೆಯ ಅಕ್ಕಿ ಚೀಲವನ್ನು ವಶಪಡಿಸಿಕೊಂಡು  ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಪಟ್ಟಣ ಪೊಲೀಸ್‌ ಠಾಣಾ ಸರಹದ್ದು ಚಿಕ್ಕಹುಣಸೂರು ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂಡಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಚಿಲ್ಕುಂದ ಗ್ರಾಮದ ವಾಸಿ ಪಿರ್ಯಾದಿಯವರ ತಾಯಿ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂಡಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.


No comments:

Post a Comment

NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ