ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಹಳೇ ವಾರಂಚಿ ಗ್ರಾಮದ ಪಿರ್ಯಾದಿಯವರು ಸಿ ವಿಲೇಜ್, ಟಿಬೇಟ್ ಕ್ಯಾಂಪ್ ಹತ್ತೀರ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 30,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ .
ಆಂತರಸಂತೆ ಪೊಲೀಸ್ ಠಾಣಾ ಸರಹದ್ದು ಹೊನ್ನಮ್ಮಕಟ್ಟೆ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬಿಳಿಗೆರೆ ಪೊಲೀಸ್ ಠಾಣಾ ಸರಹದ್ದು ಬಿಳುಗಲಿ ಗ್ರಾಮದ ಪಿರ್ಯಾದಿಯವರ ಮಗನಿಗೆ ಆಕಸ್ಮಿಕವಾಗಿ ವಿಧ್ಯುತ್ ತಗುಲಿ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕವಲಂದೆ ಪೊಲೀಸ್ ಠಾಣಾ ಸರಹದ್ದು ಹಳೆಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಆಂದರ್ - ಬಾಹರ್ ಇಸ್ಪೀಟ್ ಆಟವಾಡುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 5,980/- ರೂ ಹಣವನ್ನು ವಶಪಡಿಸಿಕೊಂಡು 04 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment