ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಹಂಪಾಪುರ ಗ್ರಾಮದ ಪಿರ್ಯಾದಿಯವರ ಗಂಡನಿಗೆ ಮಂಡಕಳ್ಳಿ ಗೇಟ್ ಹತ್ತಿರ ಕೇರಳದ ಸರ್ಕಾರಿ ಬಸ್ಸು ವಾಹನ ಚಾಲಕನ ಅತೀವೇಗ ಹಾಗೂ ಅಜಾಗರುಕತೆಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯವರ ಮಗ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಇಲವಾಲ ಪೊಲೀಸ್ ಠಾಣಾ ಸರಹದ್ದು ಎನ್ ಸೀಗಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಆಂದರ್ - ಬಾಹರ್ ಇಸ್ಪೀಟ್ ಆಟವಾಡುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 29.510/- ರೂ ಹಣವನ್ನು ವಶಪಡಿಸಿಕೊಂಡು 09 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಹುಲ್ಲಹಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಮಲ್ಕುಮಡಿ ಗ್ರಾಮದಲ್ಲಿ ಯಾರೋ ಕಳ್ಳರು ದೇವಾಸ್ಥನದಲ್ಲಿ ಗೋಲಕಗಳನ್ನು ಹೊಡೆದು ನಗದನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 45,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

No comments:
Post a Comment