ಜಯಪುರ ಪೊಲೀಸ್ ಠಾಣಾ ಸರಹದ್ದು ಧನಗಳ್ಳಿ ಗ್ರಾಮದಲ್ಲಿ ಯಾವುದೇ ಪರವಾಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಇಲವಾಲ ಪೊಲೀಸ್ ಠಾಣಾ ಸರಹದ್ದು ಹುಯಿಲಾಳು ಗ್ರಾಮದ ಪಿರ್ಯಾದಿಯವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 30,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ರಾಜನ್ ಪಟೇಲ್ ಅವರ ಬೀದಿ ಕೆ ಆರ್ ನಗರ ಟೌನಿನ ಪಿರ್ಯಾದಿಯವರು ಕೆ ಆರ್ ಸಿ ಟಿ ಸಿ ಬಸ್ ನಿಲ್ದಾಣದ ಹತ್ತೀರ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೆಟ್ಟದಪುರ ಪೊಲೀಸ್ ಠಾಣಾ ಸರಹದ್ದು ಕಿತ್ತೂರು ಗ್ರಾಮದ ಪಿರ್ಯಾದಿಯವರು ಮನೆಯ ಬಾಗಿಲು ಮುರಿದು ಯಾರೋ ಕಳ್ಳರು 3,90,000/- ರೂ ಬೆಲೆಯ ಚಿನ್ನ ಹಾಗೂ 15,000/- ರೂ ನಗದನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬಿಳಿಗೆರೆ ಪೊಲೀಸ್ ಠಾಣಾ ಸರಹದ್ದು ಸೂತ್ತುರು ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment