ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಪುಟ್ಟೇಗೌಡನಹುಂಡಿ ಗ್ರಾಮದ ಪಿರ್ಯಾದಿಯವರ ಗಂಡ ಕಾಣೇಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದು ಶ್ರೀ ಶನೇಶ್ವರ ದೇವಸ್ಥಾನ ಹುಣಸೂರು ಪಟ್ಟಣದಲ್ಲಿ ಯಾರೋ ಕಳ್ಳರು ಹುಂಡಿಯಲ್ಲಿ ಇದ್ದ ಸುಮಾರು 3000/- ರೂ ಅನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಪಿರಿಯಾಪಟ್ಟಣ ಪೊಲೀಸ್ ಠಾಣಾ ಸರಹದ್ದು ಅಳ್ಳೂರು ಗ್ರಾಮದ ಪಿರ್ಯಾದಿಯವರ ತಾಯಿ ಕಾಣೇಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಗೂದ್ದನಪುರ ಮರಳೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದು ಬಾತ್ಮೀದಾರರ ದೂರಿನ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಟಿ ನರಸೀಪುರ ಪೊಲೀಸ್ ಠಾಣಾ ಸರಹದ್ದು ಮೂಗೂರು ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಮನೆಯಲ್ಲಿ ಇದ್ದ ಸುಮಾರು 56,500/- ರೂ ನಗದನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment