ವರುಣಾ ಪೊಲೀಸ್ ಠಾಣಾ ಸರಹದ್ದು ಚಟ್ನಳ್ಳಿ ಗ್ರಾಮದಲ್ಲಿನ ಪಿರ್ಯಾದಿರವರ ಜಮೀನಿನಲ್ಲಿ ಯಾರೋ ಅಪರಿಚಿತರ 05 ಜನ ಆಸಾಮಿಗಳು ಸುಮಾರು 1.5 ಲಕ್ಷ ಬೆಲೆ ಬಾಳುವ ಅಡಿಕೆಯನ್ನ ಕಳ್ಳತನ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಹುಣಸೂರು ಪಟ್ಟಣ ಪೊಲೀಸ್ ಠಾಣಾ ಸರಹದ್ದು ಹುಣಸೂರು ಹೆಚ್ ಡಿ ಕೋಟೆ ರಸ್ತೆ ಯಲ್ಲಿ ಸಿದ್ದನಕೊಪ್ಪಲು ವಾಸಿ ಪಿರ್ಯಾದಿರವರ ತಂದೆಯವರು ಬರುತ್ತಿದ್ದ ಆಟೋವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗಕರೂಕತೆಯಿಂದ ಓಡಿಸಿಕೊಂಡು ಬಂದು ಅಪಘಾತವನ್ನುಂಟು ಮಾಡಿದ್ದರಿಂದ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಪಿರಿಯಾಪಟ್ಟಣ ಪೊಲೀಸ್ ಠಾಣಾ ಸರಹದ್ದು ಕಂಪಲಾಪುರ ಗ್ರಾಮದಲ್ಲಿನ ಪಿರ್ಯಾದಿರವರ ಬಾಬ್ತು ಸುಮಾರು 80 ಸಾವಿರ ರೂ ಬೆಲೆಯ ಬುಲೆಟ್ ಬೈಕನ್ನು ಕಳ್ಳತನ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಹೆಚ್ ಡಿ ಕೋಟೆ ಪೊಲೀಸ್ ಠಾಣಾ ಸರಹದ್ದು ಮೈಸೂರು ಮಾನಂದವಾಡಿ ಹ್ಯಾಂಡ್ ಪೋಸ್ಟ್ ರಸ್ತೆ ಯಲ್ಲಿ ಗುಜ್ಜಪ್ಪನಹುಂಡಿ ವಾಸಿ ಪಿರ್ಯಾದಿರವರ ದೊಡ್ಡಪ್ಪರವರಿಗೆ KL-15 A-0431 ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎದರುನಿಂಧ ತನ್ನ ಬಾಬ್ತು ಬೈಕಿನಲ್ಲಿ ಬರುತ್ತಿದ್ದ ಪಿರ್ಯಾದಿರವರ ದೊಡ್ಡಪ್ಪನಿಗೆ ಢಿಕ್ಕಿ ಮಾಡಿದ್ದರಿಂದ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಹೆಚ್ ಡಿ ಕೋಟೆ ಪೊಲೀಸ್ ಠಾಣಾ ಸರಹದ್ದು ಹೀರೇಹಳ್ಳಿ ವಾಸಿ ಪಿರ್ಯಾಧಿರವರ ಮಗಳನ್ನು ಬೂಧನೂರು ಗ್ರಾಮಕ್ಕೆ ವಿವಾಹ ಮಾಡಿಕೊಟ್ಟಿದ್ದು ಪಿರ್ಯಾದಿರವರ ಮಗಳನ್ನು ಆಕೆಯ ಗಂಡ ಕೊಲೆ ಮಾಡಿರುತ್ತಾನೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಸರಗೂರು ಪೊಲೀಸ್ ಠಾಣಾ ಸರಹದ್ದು ಟೌನ್ ನ 9 ನೇ ವಾರ್ಡಿನಲ್ಲಿ ಪಿರ್ಯಾದಿರವರನ್ನು ಮತ್ತು ಅವರ ಕುಟುಂಬದವರನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಟಿ ನರಸೀಪುರ ಪೊಲೀಸ್ ಠಾಣಾ ಸರಹದ್ದು ಪಿರ್ಯಾದಿರವರ ಮನೆಯಲ್ಲಿನ ಬಾಗಿಲನ್ನು ಮೀಟಿ ಸುಮಾರು 05 ರೂ ಮೌಲ್ಯ ಹಣ ಮತ್ತು ಉಮಾ ಗೋಲ್ಡ್ ಅನ್ನು ಕಳ್ಳತನ ಮಾಡಿರುವ ಆಸಾಮಿಯನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
No comments:
Post a Comment