ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಹೊಸಹುಂಡಿ ಗ್ರಾಮದ ಪಿರ್ಯಾದಿಯವರ ಖಾತೆಯಲ್ಲಿದ್ದ ಸುಮಾರು 4,34,340/- ರೂ ನಗದನ್ನು ಯಾರೋ ಅಪರಿಚಿತ ವ್ಯಾಕ್ತಿ ಟೇಲಿಗ್ರಾಮ್ ಅಪ್ ಮೂಲಕ ಆನ್ಲೈನ್ ವಂಚನೆ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ವರುಣ ಪೊಲೀಸ್ ಠಾಣಾ ಸರಹದ್ದು ಪಿರ್ಯಾದಿಯವರ ಮೈಸೂರು - ಟಿ ನರಸೀಪುರ ಮುಖ್ಯರಸ್ತೆಯಲ್ಲಿ ವರುಣ ಕೆರೆಯ ಹತ್ತೀರ ಇಬ್ಬರು ಅಪರಿಚಿತ ವ್ಯಾಕ್ತಿಗಳು ಹೆದರಿಸಿ 2,40,000/- ರೂ ಬೆಲೆಯ ಚಿನ್ನದ ಒಡವೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಕಾಳೆನಹಳ್ಳಿ ಹೊಡಕೊಪ್ಪಲು ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಬೀಗ ಹೊಡೆದು 20,000/- ರೂ ನಗದು ಹಾಗೂ ಚಿನ್ನ ಮತ್ತು ಬೆಳ್ಳಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಗಂಧನಹಳ್ಳಿ ಗ್ರಾಮದ ಪಿರ್ಯುದಿಯವರ ಮಗ ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬಿಳಿಕೆರೆ ಪೊಲೀಸ್ ಠಾಣಾ ಸರಹದ್ದು ಹಳೇಬಿಡು ಗ್ರಾಮದ ಪಿರ್ಯಾದಿಯವರ ತಂದೆ ಪ್ರತಿದಿನ ಸೇವಿಸುವುದರ ಬದಲಾಗಿ ಕ್ರಿಮಿನಾಶಕ ಸೇವಿಸಿ ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಪಿರಿಯಪಟ್ಟಣ ಪೊಲೀಸ್ ಠಾಣಾ ಸರಹದ್ದು ರಾವಂದೂರು ಎಸ್ ಕೊಪ್ಪಲು ಗ್ರಾಮದ ವಾಸಿ ಪಿರ್ಯುದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಸರಗೂರು ಪೊಲೀಸ್ ಠಾಣಾ ಸರಹದ್ದು ದೇವಲಾಪುರ ಗ್ರಾಮದ ಪಿರ್ಯಾದಿಯವರ ಗಂಡ ತುಂಬುಸೋಗೆ ಸಮೀಪ ಶನೇಶ್ವರ ದೇವಸ್ಥಾನದ ಹತ್ತೀರ ನಾಲೆಯಲ್ಲಿ ಸ್ನಾನ ಮಾಡಲು ಹೋಗಿ ಜಾರಿಬಿದ್ದು ಮೃತರಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment