ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಮಾನಸಿ ನಗರ ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ವರುಣ ಪೊಲೀಸ್ ಠಾಣಾ ಸರಹದ್ದು ವಾಜಮಂಗಲ ಗ್ರಾಮದ ಬಳಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದಾರೆ ಎಂದು ಬಾತ್ಮೀಯದಾರರು ನೀಡಿದ ಮಾಹಿತಿ ಮೇರೆಗೆ ಪಿ ಎಸ್ ಐ ರವರು ಸಿಬ್ಬಂದಿ ಸಂಮೇತ ದಾಳಿ ಮಾಡಿ 7535/- ರೂ ಹಣವನ್ನು ವಶಪಡಿಸಿಕೊಂಡು 10 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಬೆಟ್ಟದಪುರ ಪೊಲೀಸ್ ಠಾಣಾ ಸರಹದ್ದು ಕೊರಗಲ್ಲು ಗ್ರಾಮ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಅಂತರಸಂತೆ ಪೊಲೀಸ್ ಠಾಣಾ ಸರಹದ್ದು ಹೊಸಹೊಳಲು ಗ್ರಾಮ ವಾಸಿ ಪಿರ್ಯಾದಿಯವರ ಮಗಳು ಕಾಣೆಯಾಗಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬನ್ನೂರು ಪೊಲೀಸ್ ಠಾಣಾ ಸರಹದ್ದು ಚಾಮನಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಬಾಬ್ತು ಸುಮಾರು 2,77,000/- ರೂ ಬೆಲೆಬಾಳುವ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

No comments:
Post a Comment