ಜಯಪುರ ಪೊಲೀಸ್ ಠಾಣಾ ಸರಹದ್ದು ಕೆ ಮಾದಳ್ಳಿ ಗ್ರಾಮದ ಜಮೀನಿನಲ್ಲಿ ಆಕ್ರಮವಾಗಿ ಇಸ್ಪೀಟ್ ಆಟವಾಡುತ್ತಿದ್ದು ಬಾತ್ಮೀದಾರರು ದೂರಿನ ಮೇರೆಗೆ 7420/- ರೂ ನಗದು 52 ಇಸ್ಪೀಟ್ ಕಾರ್ಡಗಳುನ್ನು ವಶಪಡಿಸಿಕೊಂಡು 04 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ವರುಣ ಪೊಲೀಸ್ ಠಾಣಾ ಸರಹದ್ದು ಮೆಲ್ಲಹಳ್ಳಿ ಗ್ರಾಮದ ಪಿರ್ಯಾದಿಯವರ ಆಣ್ಣ ಕಾಣೇಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ವರುಣ ಪೊಲೀಸ್ ಠಾಣಾ ಸರಹದ್ದು ದೇವೆಗೌಡನಹುಂಡಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಮದ್ಯ ಮಾರುತ್ತಿದ್ದು ಬಾತ್ಮೀದಾರರು ದೂರಿನ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಹುಲ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಮಡಿಕೆಹುಂಡಿ ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಸುಮಾರು 9 ಲಕ್ಷ ರು ಬೆಲೆಯ ಚಿನ್ನ ಹಾಗೂ 5 ಲಕ್ಷ ರೂ ನಗದನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment