ಇಲವಾಲ ಪೊಲೀಸ್ ಠಾಣಾ ಸರಹದ್ದು ಮೀನಾಕ್ಷಿಪುರ ಗ್ರಾಮದ ಕಾವೇರಿ ಹಿನ್ನೀರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟು ಮದ್ಯದ ಬೀಯಾರ್ ಬಾಟಲ್ ನೀಡುತ್ತೀರುವ ವಿಷಯವು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ ಮದ್ಯ ವಶಪಡಿಸಿಕೊಂಡು 06 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಕೆ ಆರ್ ನಗರ ಪೊಲೀಸ್ ಠಾಣಾ ಸರಹದ್ದು ಹಂಪಾಪುರ ಗ್ರಾಮದ ಪಿರ್ಯಾದಿಯವರ ಮಗಳು ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೈಲುಕುಪ್ಪೆ ಪೊಲೀಸ್ ಠಾಣಾ ಸರಹದ್ದು ಮುತ್ತಿನಮುಳುಸೋಗೆ ಗ್ರಾಮದ ಪಿರ್ಯಾದಿಯವರ ತಂದೆ ಅತೀಯಾದ ಸಾಲಬಾದೆಯಿಂದ ಮನನೊಂದು ವಿಷ ಸೇವಿಸಿ ಮೃತರಾಗಿರುತ್ತಾರೆ ಎಂದು ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment