ಇಲವಾಲ ಪೊಲೀಸ್ ಠಾಣಾ ಸರಹದ್ದು ಕೆ ಆರ್ ಎಸ್ ಬೈಪಾಸ್ ರಸ್ತೆಯಲ್ಲಿರುವ ಲೈಟ್ ಹೌಸ್ ಬಾರ್ ಅಂಡ್ ರೆಸ್ಟೋರೆಂಟ್ ಹಿಂಬಾಗ ಸಾರ್ವಜನಿಕ ಸ್ಥಳದಲ್ಲಿ ಅಂದರ್ - ಬಾಹರ್ ಆಟವಾಡುತ್ತಿದ್ದು ಬಾತೀದಾರರ ದೂರಿನ ಮೇರೆಗೆ ಪಿಎಸ್‌ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 52 ಇಸ್ಪೀಟ್ ಎಲೆ 51,140/- ರೂ ನಗದನ್ನು ವಶಪಡಿಸಿಕೊಂಡು 04 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಹುಣಸೂರು ಪಟ್ಟಣ ಠಾಣಾ ಸರಹದ್ದು ಬಾಲಕರ ಪದವಿ ಪೊರ್ವ ಕಾಲೇಜ್ ಎದುರು ಹುಣಸೂರು ಟೌನಿನ ವಾಸಿ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಹೊಡೆದು ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ 1,49,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೈಲುಕುಪ್ಪೆ ಪೊಲೀಸ್ ಠಾಣಾ ಸರಹದ್ದು ಮರಡಿಯೂರು ಗ್ರಾಮದ ಪಿರ್ಯಾದಿಯವರ ಮಗಳು ಕಾಣೇಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಅಂಡುವಿನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಟವಾಡುತ್ತಿದ್ದು ಬಾತೀದಾರರ ದೂರಿನ ಮೇರೆಗೆ ಪಿಎಸ್‌ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 4-5 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಕೊಪ್ಪಲೂರು ಗ್ರಾಮದ ಸಿದ್ದಲಿಂಗೇಶ್ವರ ಬಡವಾಣೆಯ ಹಿಂಬಾಗ ಸಾರ್ವಜನಿಕ ಸ್ಥಳದಲ್ಲಿ ಅಂದರ್ - ಬಾಹರ್ ಆಟವಾಡುತ್ತಿದ್ದು ಬಾತೀದಾರರ ದೂರಿನ ಮೇರೆಗೆ ಪಿಎಸ್‌ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 52 ಇಸ್ಪೀಟ್ ಎಲೆ 17,130/- ರೂ ನಗದನ್ನು ವಶಪಡಿಸಿಕೊಂಡು 14 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment