ವರುಣ ಪೊಲೀಸ್ ಠಾಣಾ ಸರಹದ್ದು ಆಯರಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಅಡುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್ ಐ ಹಾಗೂ ಸಿಬ್ಬಂದಿಗಳು ಮಾಡಿ ಸುಮಾರು 3200/- ರೂ ನಗದು ಹಾಗೂ 52 ಇಸ್ಪೀಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಸಾಲಿಗ್ರಾಮ ಪೊಲೀಸ್ ಠಾಣಾ ಸರಹದ್ದು ನರಚನಹಳ್ಳಿ ಗ್ರಾಮದಲ್ಲಿ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಸುಮಾರು 1,36,000/- ಚಿನ್ನದ ಓಡವೆಯನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಬೆಟ್ಟದಪುರ ಪೊಲೀಸ್ ಠಾಣಾ ಸರಹದ್ದು ಬಸವನಹಳ್ಳಿ ಗ್ರಾಮದಲ್ಲಿ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಸುಮಾರು 2.50,000/-ನಗದು ಹಾಗೂ 30ಗ್ರಾಂ ಚಿನ್ನದ ಓಡವೆಯನ್ನು ಕಳ್ಳತನ ಮಾಡಿರುತ್ತಾರೆ ಅದರ ಬೆಲೆ ಸುಮಾರು 3,00,000/- ರೂ ಎಂದು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಟಿ ನರಸೀಪುರ ಪೊಲೀಸ್ ಠಾಣಾ ಸರಹದ್ದು ಕೆರೊಹಟ್ಟಿ ಗ್ರಾಮದ ಪಿರ್ಯಾದಿಯವರ ತಾಯಿ ಕಾಣೇಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
